ಸಂವತ್ಸರ
	ಒಂದು ಚಾಂದ್ರಮಾನ ವರ್ಷವನ್ನು `ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ 60 ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಶುಕ್ಲ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಮೊದಲನೆಯ ಸಂವತ್ಸರವು `ಪ್ರಭವ ಎಂಬ ಹೆಸರಿನಿಂದ ಕರೆಸಿಕೊಂಡರೆ ಕೊನೆಯ ಅಂದರೆ 60ನೇ ಸಂವತ್ಸರವನ್ನು ಕ್ಷಯ ಅಥವಾ ಅಕ್ಷಯ ಎಂದು ಕರೆಯಲಾಗಿದೆ. ಬೃಹಸ್ಪತಿ ಗ್ರಹವು ಒಂದು ಪ್ರದಕ್ಷಿಣೆ ಮುಗಿಸಲು 12 ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಇದನ್ನು "ಬಾರ್ಹಸ್ಪತ್ಯ ಯುಗ" ಎನ್ನುತ್ತಾರೆ. ಇಂತಹ ಐದು ಬಾರ್ಹಸ್ಪತ್ಯ ಯುಗಗಳ ಒಟ್ಟು ಕಾಲಾವಧಿ 60 ವರ್ಷಗಳ ಒಂದು ಚಕ್ರಕ್ಕೆ ಅಷ್ಟು ಸಂವತ್ಸರಗಳೆಂದು ಪರಿಗಣಿಸುತ್ತೇವೆ.
(ನೋಡಿ-  ತಾರೀಕುಪಟ್ಟಿ) 
(ನೋಡಿ-  ಪಂಚಾಂಗ)	

ಸಂವತ್ಸರಗಳು (60)
ಕ್ರಮ ಸಂಖ್ಯೆ
ಸಂವತ್ಸರಗಳು
ಕ್ರಮ ಸಂಖ್ಯೆ
ಸಂವತ್ಸರಗಳು
ಕ್ರಮ ಸಂಖ್ಯೆ
ಸಂವತ್ಸರಗಳು

1
ಪ್ರಭವ
21
ಸರ್ವಜಿತ್
41
ಪ್ಲವಂಗ

2
ವಿಭವ
22
ಸರ್ವಧಾರಿ
42
ಕೀಲಕ

3
ಶುಕ್ಲ
23
ವಿರೋಧಿ
43
ಸೌಮ್ಯ

4
ಪ್ರಮೋದೂತ
24
ವಿಕೃತಿ
44
ಸಾಧಾರಣ

5
ಪ್ರಜೋತ್ಪತ್ತಿ
25
ಖರ
45
ವಿರೋಧಿಕೃತ್

6
ಅಂಗಿರಸ
26
ನಂದನ
46
ಪರೀಧಾವಿ

7
ಶ್ರೀಮುಖ
27
ವಿಜಯ
47
ಪ್ರಮಾದೀಚ

8
ಭಾವ
28
ಜಯ
48
ಆನಂದ

9
ಯುವ
29
ಮನ್ಮಥ
49
ರಾಕ್ಷಸ

10
ಧಾತು
30
ದುರ್ಮುಖಿ
50
ನಳ

11
ಈಶ್ವರ
31
ಹೇವಿಳಂಬಿ
51
ಪೈಂಗಳ

12
ಬಹುಧಾನ್ಯ
32
ವಿಳಂಬಿ
52
ಕಾಳಯುಕ್ತಿ

13
ಪ್ರಮಾಥಿ
33
ವಿಕಾರಿ
53
ಸಿದ್ಧಾರ್ಥಿ

14
ವಿಕ್ರಮ
34
ಶಾರ್ವರಿ
54
ರೌದ್ರಿ

15
ವಿಷು
35
ಪ್ಲವ
55
ದುರ್ಮತಿ

16
ಚಿತ್ರಭಾನು
36
ಶುಭಕೃತ್
56
ದುಂಧುಭಿ

17
ಸ್ವಭಾನು
37
ಶೋಭಕೃತ್
57
ರುಧಿರೋದ್ಗಾರಿ

18
ತಾರಣ
38
ಕ್ರೋಧಿ
58
ರಕ್ತಾಕ್ಷಿ

19
ಪಾರ್ಥಿವ
39
ವಿಶ್ವಾವಸು
59
ಕ್ರೋಧನ

20
ವ್ಯಯ
40
ಪರಾಭವ
60
ಅಕ್ಷಯ

(ಎಸ್.ಕೆಯು,; ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ